ಮುಂಬೈ : ನಿರ್ದೇಶಕ ನಿತೇಶ್ ತಿವಾರಿ ಅವರ ಭಾರೀ ಬಜೆಟ್‌ನ ‘ರಾಮಾಯಣ’ ಚಿತ್ರದ ಸದ್ವುಯದಲ್ಲಿಯೇ ಸೆಟ್ಟೆರಲಿದೆ. ಅದಕ್ಕೆ ಬೇಕಾಗಿರುವ ಹೂಡಿಕೆ, ತಾರಾಗಣ, ತಂತ್ರಜ್ಞಾನ, ಕಲಾತ್ಮಕತೆ, ತಂತ್ರಜ್ಞಾಣ ಎಲ್ಲದಕ್ಕೂ ಚಿತ್ರತಂಡವು ಹೊಸ ರೀತಿಯಲ್ಲಿ ಸಜ್ದೆಜ್ಜಾಗುತ್ತಿದೆ.. ಈ ರಾಮಯಣ ಚಿತ್ರವು ಮೂರು ಭಾಗಗಳಲ್ಲಿ ತೆರೆಕಾಣಲಿದ್ದು, ಅದು ಭಾರತೀಯ ಸಿನೆಮಾ ಕ್ಷೇತ್ರದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ ಎಂದು ಅಂದಾಜಿಸಲಾಗಿದೆ.
ಮುಂದಿನ ದಿಪಾವಳಿಗೆ ಮೊದಲ ಭಾಗ ಬಿಡುಗಡೆ
ಚಿತ್ರದ ಮೊದಲ ಭಾಗವನ್ನು 2026ರ ದಿಪಾವಳಿ ಸಮಯಕ್ಕೆ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ. ಎರಡನೇ ಭಾಗ 2027ರ ದಿಪಾವಳಿಯ ಸಂದರ್ಭದಲ್ಲಿ ತೆರೆಗೆ ಬರುವುದುಕ್ಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. 3D ತಂತ್ರಜ್ಞಾನದಲ್ಲಿ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರವನ್ನು ಚಿತ್ರಿಕರಣ ಮಾಡಲಾಗುವುದು ಎಂಬ ಪ್ರಾಥಮಿಕ ಮಾಹಿತಿಯನ್ನು ನಿರ್ದೇಶಕ ನಿತೇಶ್ ತಿವಾರಿ ಅ ವರ ತಂಡ ಹೇಳಿಕೊಂಡಿದೆ.
835 ಕೋಟಿ ರೂ. ಬೃಹತ್ ಬಜೆಟ್ – ಭಾರತೀಯ ಸಿನೆಮಾ ಇತಿಹಾಸದಲ್ಲಿ ಅತ್ಯಂತ ದುಬಾರಿ ಪ್ರಾಜೆಕ್ಟ್
ಹೌದು ನಿತೇಶ್ ತಿವಾರಿ ಅವರ ನಿರ್ದೇಶನದ ರಾಮಾಯಣ ಚಿತ್ರ ಭಾರತ ಚಿತ್ರರಂಗದ ಇತಿಹಾಸದಲ್ಲಿ ದೋಡ್ಡ ಬಜೆಟ್ ಸಿನೇಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಚಿತ್ರದ ಮೊದಲ ಭಾಗಕ್ಕಾಗಿ ಬರೋಬ್ಬರಿ ₹835 ಕೋಟಿ ರೂಪಾಯಿಗಳಷ್ಟು ಭರಪೂರ ಬಜೆಟ್ ವಿನಿಯೋಗಿಸಲಾಗುತ್ತಿದೆ. ಇದು ಇದುವರೆಗೆ ನಿರ್ಮಿಸಲಾದ ಭಾರತೀಯ ಚಿತ್ರಗಳ ಪೈಕಿ ಅತಿದೊಡ್ಡ ಬಜೆಟ್ ಹೊಂದಿರುವ ಚಿತ್ರಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ಮ್ಯಾಡ್ ಮ್ಯಾಕ್ಸ್ ಖ್ಯಾತಿಯ ಗೈ ನೊರಿಸ್ ನೇತೃತ್ವದ ತಂಡವು ಚಿತ್ರದ ಸಾಹಸ ದೃಶ್ಯಗಳನ್ನು ಸಿದ್ದಪಡಿಸುವಲ್ಲಿ ಸಹಕರಿಸಲಿದೆ. ಇನ್ನು ಮ್ಯಾಡ್ ಮ್ಯಾಕ್ಸ್ ತಂಡದ ಪ್ರಕಾರ ಯಶ್ ಅವರ ಪಾತ್ರದ ದೃಶ್ಯಗಳು ಅತ್ಯಂತ ವಿಸ್ಮಯಕಾರಿಯಾಗಲಿವೆ ಎನ್ನಲಾಗಿದೆ. ರಾಮಾಯಣ ಚಿತ್ರಕ್ಕೆ ಈಗಾಗಲೇ CBFC ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರದ ಅಧಿಕೃತ ಟೈಟಲ್ ವಿಡಿಯೋ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಮಾಹಿತಿ ನೀಡಿದೆ. ನಿತೇಶ್ ತಿವಾರಿಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇದು ಬಹು ನೀರಿಕ್ಷಿತ ಚಿತ್ರವಾಗಲಿದ್ದು, ಅದರಲ್ಲಿ ನಾಟಕೀಯತೆ, ತಂತ್ರಜ್ಞಾನ, ತಾರಾಬಳಗ, ಮತ್ತು ಭರಪೂರ ಭಾರತೀಯ ಪುರಾಣೀಯ ಅಂಶಗಳ ಒಳ ಹೂರಣ ಮೇಳೈಸಿಕೊಳ್ಳಲಿದೆ. ಇದು ಭಾರತದ ಅತ್ಯಂತ ನಿರೀಕ್ಷಿತ ಚಿತ್ರಗಳ ಪೈಕಿ ಒಂದಾಗಿದೆ.
ತಾರಾಬಳಗದಲ್ಲಿ ದೇಶದ ಬಹುತೇಕ ಪ್ರಮುಖ ಖ್ಯಾತ ನಟರು ನಟಿಸಲಿದ್ದಾರೆ.
ಪಾತ್ರ | ನಟ/ನಟಿ | ಪಾತ್ರ | ನಟ/ನಟಿ |
ಶ್ರೀರಾಮ | ರಣಬೀರ್ ಕಪೂರ್ | ಸೀತಾ | ಸಾಯಿ ಪಲ್ಲವಿ |
ರಾವಣ | ಯಶ್ | ಲಕ್ಷ್ಮಣ | ರವಿ ದುಬೆ |
ಹನುಮಾನ್ | ಸನ್ನಿ ದಿಯೋಲ್ | ಕೈಕೇಯಿ | ಲಾರಾ ದತ್ತಾ |
ದಶರಥ ಮಹಾರಾಜ | ಅರುಣ್ ಗೋವಿಲ್ | ಶೂರ್ಪಣಖ | ರಕುಲ್ ಪ್ರೀತ್ ಸಿಂಗ್ |
ವಿಭೀಷಣ | ವಿಜಯ್ ಸೇತುಪತಿ | ಮುನಿ ವಶಿಷ್ಠ | ಶಿಶಿರ್ ಶರ್ಮಾ |
ಇಂದ್ರ ದೇವ | ಕುನಾಲ್ ಕಪೂರ್ | ಕೌಸಲ್ಯ | ಇಂದಿರಾ ಕೃಷ್ಣನ್ |
ಕುಂಬಕರ್ಣ | ಬಾಬಿ ದಿಯೋಲ್ | ಜಟಾಯು | ಅಮಿತಾಭ್ ಬಚ್ಚನ್ (ಧ್ವನಿಯಾಗಲಿದ್ದಾರೆ) |
ಮಂಡೋಧರಿ | ಕಾಜಲ್ ಅಗರ್ವಾಲ್ |
Publisher: ಕನ್ನಡ ನಾಡು | Kannada Naadu